ಅರಾಟಸ್ : ಪ್ರ.ಶ.ಪೂ. 315-245. ಗ್ರೀಸ್ ದೇಶದ ಕವಿ. ಜನನ ಸಿಸಿಲಿಯ
ಸೋಲಿಯಲ್ಲಿ. ಮ್ಯಾಸಿಡೋನಿಯ ದೊರೆ   ಆಂಟಿಗೋನ ಗಾನಟಾಸ್ ಆಸ್ಥಾನದಲ್ಲಿದ್ದ. 
ಈತ ಖಗೋಳವಿಜ್ಞಾನದ ಮೇಲೆ ಬರೆದ ಫೆನೋಮೆನ ಎಂಬ ಪ್ರಖ್ಯಾತ ಪದ್ಯವನ್ನು
ಸಿಸಿರೊ ಲ್ಯಾಟಿನ್ ಭಾಷೆಗೆ ತರ್ಜುಮೆ ಮಾಡಿದ್ದಾನೆ. ಅರಾಟಸ್ ರಾಜಧಾನಿಯಲ್ಲೇ
ಕಾಲವಾದ. (ಟಿ.ಎಚ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ